ಅಭಿಪ್ರಾಯ / ಸಲಹೆಗಳು

ಸಾರ್ವಜನಿಕ ವಿತರಣೆ ಪದ್ಧತಿ

ಸಾರ್ವಜನಿಕ ವಿತರಣೆ ಪದ್ಧತಿ


ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಯುಕ್ತರಿಂದ ಪ್ರತೀ ತಿಂಗಳು ಆಹಾರ ಧಾನ್ಯಗಳನ್ನು ಜಿಲ್ಲಾವಾರು ಹಂಚಿಕೆ ನೀಡಲಾಗುತ್ತದೆ. ಅದಕ್ಕನುಗುಣವಾಗಿ ಜಿಲ್ಲಾಧಿಕಾರಿಗಳು ತಾಲ್ಲೂಕುವಾರು ಮರು ಹಂಚಿಕೆಯನ್ನು ಮಾಡುತ್ತಾರೆ. ಬೆಂಗಳೂರಿನ ಐ.ಆರ್.ಎ ವಿಭಾಗಕ್ಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಿಂದ ಹಂಚಿಕೆ ಆದೇಶ ನೀಡಲ್ಪಡುತ್ತದೆ.
ಈ ಹಂಚಿಕೆಯ ಆಧಾರದ ಮೇಲೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರು, ಭಾರತ ಆಹಾರ ನಿಗಮಕ್ಕೆ ಹಣ ಪಾವತಿ ಮಾಡಿ, ಅವರಿಂದ ಬಿಡುಗಡೆ ಪತ್ರವನ್ನು ಪಡೆದು ಆಹಾರ ಧಾನ್ಯಗಳನ್ನುಅಧಿಕೃತ ಸಾಗಾಣಿಕೆದಾರರ ಮೂಲಕ ತಮ್ಮ ಮಳಿಗೆಗಳಿಗೆ ಸಾಗಿಸಲಾಗುತ್ತದೆ. ಆಹಾರ ಧಾನ್ಯಗಳ ಗುಣಮಟ್ಟ ಗುಣಮಟ್ಟವನ್ನು ನಿರ್ಧರಿಸಲು, ಸಾಧಾರಣ ಸರಾಸರಿ ಗುಣಮಟ್ಟದಲ್ಲಿ ಪರೀಕ್ಷಿಸಲಾಗುವುದು.
ಆಹಾರ ಧಾನ್ಯಗಳನ್ನು ಪಡೆಯುವುದು ಮತ್ತು ಅವುಗಳನ್ನು ಚಿಲ್ಲರೆ ಮಾರಾಟಕ್ಕೆ ವಿತರಿಸುವ ಕ್ರಮ ಭಾರತ ಆಹಾರ ನಿಗಮ ನಿಗಧಿಪಡಿಸಿದ ವೇಳಾ ಪಟ್ಟಿಯಂತೆ ಅನುಸರಿಸಬೇಕಾಗುತ್ತದೆ.
1. ಅಂತ್ಯೋದಯ ಅನ್ನಯೋಜನೆ ಮತ್ತು ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರ ಯೋಜನೆಗಳಿಗಾಗಿ ಹಂಚಿಕೆಯಾಗಿರುವ ದವಸ ಧಾನ್ಯಗಳನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಪ್ರತೀ ತಿಂಗಳು 10ನೇ ತಾರೀಖಿನ ಒಳಗೆ ಸಂಪೂರ್ಣವಾಗಿ ಎತ್ತುವಳಿ ಮಾಡಬೇಕಾಗುತ್ತದೆ.
ಬಡತನದ ರೇಖೆಗಿಂತ ಮೇಲ್ಪಟ್ಟವರು ಮತ್ತು ಆರ್ಥಿಕವಾಗಿ ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗಾಗಿ ಆಹಾರ ಧಾನ್ಯವನ್ನು ಅಗತ್ಯವನ್ನು ನೋಡಿಕೊಂಡು ಪ್ರತಿ ತಿಂಗಳು 20 ರ ಒಳಗಾಗಿ ಎತ್ತುವಳಿ ಮಾಡಬೇಕಾಗುತ್ತದೆ.
2.ಹಂಚಿಕೆಯಾದ ಆಹಾರ ಧಾನ್ಯವನ್ನು ನ್ಯಾಯಬೆಲೆ ಅಂಗಡಿದಾರರು ಸಗಟು ಮಳಿಗೆಯಿಂದ 15ನೇ ತಾರೀಖಿನ ಒಳಗೆ ಕಡ್ಡಾಯವಾಗಿ ಬಿಲ್ ಹಾಕಿಸಿ ಎತ್ತುವಳಿ ಮಾಡತಕ್ಕದ್ದು, ನಂತರ ಪಡಿತರ ಚೀಟಿದಾರರಿಗೆ ಎತ್ತುವಳಿ ಮಾಡಿದ ಆಹಾರ ಧಾನ್ಯಗಳನ್ನು ಆಯಾ ತಿಂಗಳ 25ನೇ ತಾರೀಖಿನ ಒಳಗೆ ವಿತರಿಸತಕ್ಕದ್ದು.
ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗೆ, ಜಿಲ್ಲಾಧಿಕಾರಿಯವರಿಂದ ಒಪ್ಪಿಗೆ ಪಡೆದ ಕಾಂಟ್ರಾಕ್ಟರುದಾರರ ಮೂಲಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಆಹಾರ ಧಾನ್ಯವನ್ನು ಪಡೆಯಬೇಕಾಗುತ್ತದೆ. ನಂತರ ಆಹಾರ ಸಾಮಾಗ್ರಿಗಳನ್ನು ಗ್ರಾಮಾಂತರ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲಾಗುತ್ತದೆ. ಇತರೆ ಕಾರ್ಡ್‍ದಾರರಿಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರು ಸಗಟು ಮಳಿಗೆಗೆ ಹೋಗಿ,ಹಣ ಪಾವತಿ ಮಾಡಿ, ಆಹಾರ ಧಾನ್ಯಗಳನ್ನು ಪಡೆದು ಸಾರ್ವಜನಿಕರಿಗೆ ವಿತರಿಸುತ್ತಾರೆ. ತೂಕದಲ್ಲಿ ವ್ಯತ್ಯಾಸ ಬರದಂತೆ ನೋಡಿಕೊಳ್ಳಲು ನಿಗಮವು ಪ್ರತಿಯೊಂದು ಸಗಟು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಮಾಪಕಗಳನ್ನು ಹೊಂದಿರುತ್ತದೆ.

ಇತ್ತೀಚಿನ ನವೀಕರಣ​ : 30-04-2020 01:18 PM ಅನುಮೋದಕರು: KfcscAdminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080