ಅಭಿಪ್ರಾಯ / ಸಲಹೆಗಳು

ಮಧ್ಯಾಹ್ನದ ಬಿಸಿಯೂಟ ಯೋಜನೆ

ಮಧ್ಯಾಹ್ನದ ಬಿಸಿಯೂಟ ಯೋಜನೆ
2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆಬೇಳೆಗಳನ್ನೊಳಗೊಂಡ ಆಹಾರವನ್ನು ಒದಗಿಸಲು ನಿರ್ಧರಿಸಿದೆ. ಈ ಪ್ರತಿಷ್ಠಿತ ಘನ ಯೋಜನೆಯನ್ನು ಜಾರಿಗೊಳಿಸಲು ಘನ ಸರ್ಕಾರವು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಒಂದು ಸಂಸ್ಥೆಯನ್ನಾಗಿ ನೇಮಿಸಿರುತ್ತದೆ. ಕೆಲವು ಪ್ರಮುಖ ಅಂಶಗಳು ಈ ಮುಂದಿನಂತಿವೆ.
ಒಂದನೇ ತರಗತಿಯಿಂದ ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಉಚಿತ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಒಂಭತ್ತನೇ ಮತ್ತು ಹತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಎಪಿಎಲ್ ದರದಲ್ಲಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

ಈ ಯೋಜನೆಯ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಉಚಿತವಾಗಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿನಲ್ಲಿಯೂ ಎನ್‍ಸಿಡಿಇಎಕ್ಸ್‍ನ ಇ-ಹರಾಜಿನ ಮೂಲಕ ಆ ತಿಂಗಳಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪೂರೈಸಬಲ್ಲ ನೋಂದಾಯಿತ ಪೂರೈಕದಾರರಿಂದ ಅಕ್ಕಿಯನ್ನು ಖರೀದಿಸಿ ರಿಯಾಯಿತಿ ದರದಲ್ಲಿ ಮಾರಲಾಗುತ್ತಿದೆ.
2. 2011 ರಿಂದ ತೊಗರಿಬೇಳೆ ಮತ್ತು ಸಂಸ್ಕರಿತ ತಾಳೆ ಎಣ್ಣೆಗಳನ್ನು, 2015 ರಿಂದ ಕಡಲೇಬೇಳೆಯನ್ನು ಹಾಗೂ 2017 ರಿಂದ ದ್ವಿಗುಣ ಬಲವರ್ಧಿತ ವಿಟಮಿನ್ ಎ ಮತ್ತು ಡಿ ಗಳನ್ನು ನೀಡಲಾಗುತ್ತಿದೆ. ಈ ಆಹಾರ ಧಾನ್ಯಗಳು ಮತ್ತು ಖಾದ್ಯ ತೈಲಗಳನ್ನು ಎನ್‍ಸಿಡಿಇಎಕ್ಸ್‍ನ ಇ-ಹರಾಜಿನ ಮುಖಾಂತರ ನೋಂದಾಯಿತ ಪೂರೈಕೆದಾರರಿಂದ ಖರೀದಿಸಲಾಗುತ್ತಿದೆ. ಆದರೆ ಜೂನ್- 2018ರ ನಂತರ ತೊಗರಿಬೇಳೆಯನ್ನು ಸರ್ಕಾರದ ನಿರ್ದೇಶನದಂತೆ ಎನ್‍ಎಎಫ್‍ಇಡಿ ಇವರಿಂದ ಖರೀದಿಸಲಾಗುತ್ತಿದೆ.
3. ಸಾಮಾನ್ಯ ಅಕ್ಕಿ ಮತ್ತು ಕಡಲೇಬೇಳೆಗಳ ಗುಣಮಟ್ಟವನ್ನು ಅಳೆಯಲು ಎನ್‍ಸಿಎಂಎಲ್, ಹೈದರಾಬಾದ್ ಇವರನ್ನು ಗುಣಮಟ್ಟ ಮೌಲ್ಯಮಾಪನಕ್ಕೆ ಮೂರನೇ ವ್ಯಕ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿಗಮವು ರಾಜ್ಯಾದ್ಯಂತ 67 ಉಗ್ರಾಣಗಳನ್ನು ಹೊಂದಿದೆ. ಕೆಲವು ಜಿಲ್ಲೆಗಳಲ್ಲಿ 37 ಪ್ರತ್ಯೇಕ ಉಗ್ರಾಣಗಳನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯ ಆಹಾರ ಸಾಮಗ್ರಿಗಳ ದಾಸ್ತಾನಿಗಾಗಿ ನಿರ್ವಹಿಸಲಾಗುತ್ತಿದೆ. 206 ಪಿಡಿಎಸ್ ಉಗ್ರಾಣಗಳಲ್ಲಿ ಕೆಲವು ಉಗ್ರಾಣಗಳನ್ನು ಜಂಟಿಯಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಸರಕುಗಳ ವಹಿವಾಟು ನಡೆಸಲಾಗುತ್ತಿದೆ.

ಇತ್ತೀಚಿನ ನವೀಕರಣ​ : 28-04-2020 08:18 PM ಅನುಮೋದಕರು: KfcscAdmin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080